BlogCulturalEducationHighlightsHuman storiesLifestyleLocal newsNational NewsObituaryOthersState newsTop StoriesTrendingWomen Care

ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ಉಪನ್ಯಾಸಕಿ, ತೆಕ್ಕಟ್ಟೆ ನಿವಾಸಿ ಡಾ. ಪ್ರಮೀಳಾ ವಾಜ್ ನಿಧನ

Aware others:

ಕುಂದಾಪುರ: ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ಸ್ಪೂರ್ತಿಧಾಮ ಸಂಸ್ಥೆಯ ಸಂಸ್ಥಾಪಕಿ, ಸಮಾಜ ಸೇವಕಿ, ಉಪನ್ಯಾಸಕಿ ಡಾ. ಪ್ರಮೀಳಾ ವಾಜ್ ದೀರ್ಘಕಾಲದ ಅಸೌಖ್ಯದಿಂದ (60) ಅ.2ರಂದು ಶುಕ್ರವಾರ ಮಧ್ಯಾಹ್ನ ತೆಕ್ಕಟ್ಟೆಯ ಸ್ವಗೃಹದಲ್ಲಿ ನಿಧನರಾದರು.

ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದಲ್ಲಿ ಉಪನ್ಯಾಸಕಿಯಾಗಿದ್ದ ಪ್ರಮೀಳಾ ವಾಜ್ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ ‘ಮಕ್ಕಳ ರಕ್ಷಣಾ ವ್ಯವಸ್ಥೆ ಮತ್ತು ಮಕ್ಕಳ ಅಭಿವೃದ್ಧಿ’ ಎಂಬ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.

ಪ್ರಮೀಳಾ ವಾಜ್, ಬಾರ್ಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕೋಟ ಪಡುಕೆರೆಯ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರಿನ ಪಡಿ ಸಂಸ್ಥೆ (ವೆಲೋರೆಡ್)ಯಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ್ದರು.

ಪ್ರಮೀಳಾ ವಾಜ್ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ವಾರಗಳ ಹಿಂದಷ್ಟೇ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಬೇಳೂರಿನ ಸ್ಪೂರ್ತಿಧಾಮ ಸಂಸ್ಥೆಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರರನ್ನು ವಿವಾಹವಾಗಿದ್ದ ಪ್ರಮೀಳಾ ಅವರು ಪ್ರೀತಿ ವಾಜ್ ಎಂಬ ಪುತ್ರಿ, ಓಷ್ವಾ ಎಂಬ ಅಳಿಯ, ಸಹೋದರ ಕುಂದಾಪುರದ ಖ್ಯಾತ ಕ್ರಿಕೆಟಿಗ ಪ್ರದೀಪ್ ವಾಜ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆಲವು ವರ್ಷಗಳ ಹಿಂದೆ ಕೇಶವ ಕೋಟೇಶ್ವರ ಅವರಿಗೆ ವಿವಾಹ ವಿಚ್ಛೇದನ ನೀಡಿದ್ದ ಪ್ರಮೀಳಾ ವಾಜ್ ಬಳಿಕ ತೆಕ್ಕಟ್ಟೆಯಲ್ಲಿ  ಪ್ರತ್ಯೇಕವಾಗಿ ವಾಸವಿದ್ದರು.

ನಾಳೆ ಶನಿವಾರ ಸಂಜೆ ನಾಲ್ಕು ಗಂಟೆಗೆ ಕುಂದಾಪುರದ ಹೋಲಿ ರೋಜರಿಯಾ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


Aware others:

Leave a Reply

Your email address will not be published. Required fields are marked *

error: Content is protected !!