BlogCulturalEconomyEducationEntertainmentFashionHighlightsLifestyleLocal newsOthersTop StoriesTrending

ಹಿರಿಯ ಸಾಹಿತಿ ಎ.ಎಸ್.‌ ಎನ್.‌ ಹೆಬ್ಬಾರ್‌ ಮತ್ತು ವಾಗ್ಮಿ ಡಾ. ರಾಹುಲ್‌ ದೇವರಾಜ್‌ ಶಿವಮೊಗ್ಗ ಇವರಿಗೆ ಡಾ. ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಆಯ್ಕೆ

Aware others:

ಕೋಟ : ಕೋಟತಟ್ಟು ಗ್ರಾಮ ಪಂಚಾಯತ್‌ ಮತ್ತು ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ  ಕೋಟದ ಸಹಭಾಗಿತ್ವದಲ್ಲಿ ಕಳೆದ 20 ವರುಷಗಳಿಂದ ಕಾರಂತರ ಆಸಕ್ತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ  ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಹಿರಿಯ ಸಾಹಿತಿ ಎ.ಎಸ್.‌ ಎನ್.‌ ಹೆಬ್ಬಾರ್‌ ಮತ್ತು ವಾಗ್ಮಿ ಡಾ. ರಾಹುಲ್‌ ದೇವರಾಜ್‌ ಶಿವಮೊಗ್ಗ ಆಯ್ಕೆಯಾಗಿದ್ದಾರೆ.

ಈ ಹಿಂದೆ ಹುಟ್ಟೂರ ಪ್ರಶಸ್ತಿ ಪುರಸ್ಕೃತರಾಗಿ ವೀರಪ್ಪ ಮೊಯ್ಲಿ,  ವೆಂಕಟಾಚಲ, ಕೆ. ರಾಮಕೃಷ್ಣ ಹಂದೆ,  ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ,  ಮೋಹನ ಆಳ್ವ,  ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ,  ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ. ಎಂ. ಹೆಗ್ಡೆ,  ಪ್ರಕಾಶ್‌ ರೈ,  ಪಡ್ರೆ,  ಕವಿತಾ ಮಿಶ್ರ, ನಾಡೋಜ ಡಾ. ಎಸ್.ಎಲ್.ಭೈರಪ್ಪ, ಗಿರೀಶ್‌ ಭಾರದ್ವಜ್‌,  ರಮೇಶ್‌ ಅರವಿಂದ, ಡಾ. ವಿದ್ಯಾಭೂಷಣ್‌, ಪ್ರೊ.ಕೃಷ್ಣೇಗೌಡ ಮೈಸೂರು ಅವರು ಪಡೆದುಕೊಂಡಿದ್ದಾರೆ. 

ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ  2025ರ ಪುರಸ್ಕಾರವನ್ನು ಹಿರಿಯ ವಕೀಲರು, ಕಾರಂತರ ಒಡನಾಡಿಗಳು, ಸಾಹಿತಿಗಳು, ವಾಗ್ಮಿ, ಭಾಷಣಗಾರ ಐರೋಡಿ ಶಂಕರನಾರಾಯಣ ಹೆಬ್ಬಾರ್‌ ರಿಗೂ, 2026 ನೇ ಸಾಲಿನ ಕಾರಂತ ಹುಟ್ಟೂರ ಪುರಸ್ಕಾರವನ್ನು ಪ್ರೇರಣ ಮಾತುಗಾರ ಯುವ ಮನಸ್ಸುಗಳ ಪ್ರೇರಕ ಡಾ. ರಾಹುಲ್‌ ದೇವರಾಜ್‌ ಇವರನ್ನು ಆಯ್ಕೆ ಮಾಡಲಾಗಿದೆ. 

ಪುರಸ್ಕಾರವನ್ನು ಕಾರಂತರ ಜನ್ಮದಿನವಾದ ಅಕ್ಟೋಬರ್‌ 10 ರಂದು ಮದ್ಯಾಹ್ನ 3.00 ಗಂಟೆಗೆ ವಿತರಿಸಲಾಗುವುದೆಂದು ಸಮಿತಿಯ ಗೌರವಾಧ್ಯಕ್ಷ ಆನಂದ ಸಿ. ಕುಂದರ್‌, ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ, ಆಯ್ಕೆ ಸಮಿತಿಯ ಸಂಚಾಲಕ  ಯು. ಎಸ್.‌ ಶೆಣೈ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


Aware others:

Leave a Reply

Your email address will not be published. Required fields are marked *

error: Content is protected !!