BlogCulturalEntertainmentFashionHighlightsHuman storiesLifestyleLocal newsOthersTop StoriesTrending

ಕುಂದಾಪುರ: ತೊಂಭತ್ತರ ದಾನಿ ದತ್ತಾನಂದರಿಗೆ ಅಭಿನಂದನೆಗಳ ಮಹಾಪೂರ.

Aware others:

ಕುಂದಾಪುರ: ಕುಂದಾಪುರದಲ್ಲಿ ಕೊಡುಗೈ ದೊರೆ ಎಂಬ ಖ್ಯಾತಿ ಪಡೆದ ದತ್ತಾನಂದ ಗಂಗೊಳ್ಳಿಯವರಿಗೆ ಆಗಸ್ಟ್ 31 ರಂದು  90 ತುಂಬಿದ ಸಂದರ್ಭದಲ್ಲಿ ಅಭಿಮಾನಿಗಳು ಅವರ ನಿವಾಸಕ್ಕೆ ಬಂದು ಅಭಿನಂದನೆ, ಸನ್ಮಾನ, ಗೌರವಗಳ ಮಹಾಪೂರ ಹರಿಸಿದರು. ದೀಪ ಬೆಳಗಿ, ಕೇಕ್ ಕತ್ತರಿಸಿ 90 ರ ಸಂಭ್ರಮ ಆಚರಿಸಿದ ದತ್ತಾನಂದರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ತನ್ನೆಲ್ಲ ಸೇವಾಕಾರ್ಯಕ್ಕೆ ದೇವರ ಪ್ರೇರಣೆ ಕಾರಣ ಎಂದು ಹೇಳಿ ಭಾವುಕರಾಗಿ, ಇನ್ನೂ ಈ ಕಾರ್ಯ ಮುಂದರಿಸುವುದಾಗಿ ಹೇಳಿ ಸನ್ಮಾನಕ್ಕೆ ಕ್ರೃತಜ್ಙತೆ ವ್ಯಕ್ತ ಪಡಿಸಿದರು.

ಕುಂದಾಪುರದ ಬಿ ಆರ್ ರಾಯರ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ದತ್ತಾನಂದರು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ, ರೋಟರಿ ಶತಾಬ್ದಿ ಗವರ್ನರ್ ಎಸ್ ಎನ್ ಹೆಬ್ಬಾರ್, ಸೀತಾರಾಮ ನಕ್ಕತ್ತಾಯ, ನಿಯೋಜಿತ ಲಯನ್ಸ್ ಗವರ್ನರ್ ಕೆ. ರಮಾನಂದ, ಮುಖ್ಯೋಪಾಧ್ಯಾಯ ನಿಂಗಪ್ಪ ನೇತ್ರೃತ್ವದಲ್ಲಿ ನಡೆದ ಅಭಿನಂದನಾ ಸಂಭ್ರಮದಲ್ಲಿ ಕುಂದಾಪುರ ಸರಕಾರೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಜಿ. ರಾಮಕ್ರೃಷ್ಣ, ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ಹಿರಿಯ ಉಪನ್ಯಾಸಕರುಗಳಾದ ಚಂದ್ರಶೇಖರ್, ಉದಯ ಶೆಟ್ಟಿ, ಬಿ ಆರ್ ರಾಯರ ಶಾಲಾ ವಿದ್ಯಾರ್ಥಿ ಸಮೂಹ, ಶಿಕ್ಷಕ ವೃಂದ, ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಲಕ್ಷ್ಮೀಶ ಹವಾಲ್ದಾರ್, ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಗಣೇಶ ನಾಯ್ಕ್, ಉದ್ಯಮಿ ರಘುರಾಮ ರಾವ್, ಶ್ರೀನಿವಾಸ ಶೇಟ್ ಮತ್ತಿತರರು ಭಾಗವಹಿಸಿದ್ದರು.

ಬಂಧುಗಳಾದ ವಿಶ್ವನಾಥ ಕುಂದಾಪುರ, ಭಾರತಿ ಉಪಸ್ಥಿತರಿದ್ದರು. ಹೆಬ್ಬಾರ್ ಮತ್ತಿತರರು  ಅಭಿನಂದನ ಭಾಷಣ ಮಾಡಿದರು. ಶಿಕ್ಷಕಿ ಮೀರಾ ಶೇಟ್ ಮತ್ತು ವಿದ್ಯಾರ್ಥಿ ಸಮೂಹ ಅಭಿನಂದನ ಹಾಡನ್ನು ಹಾಡಿದರು. ಮುಖ್ಯೋಪಾಧ್ಯಾಯ ನಿಂಗಪ್ಪ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!