BlogCulturalEconomyEducationElectionEntertainmentFashionHighlightsHuman storiesLifestyleLocal newsOthersSuccess storiesTop StoriesTrending

ಲಯನ್ ಜಿಲ್ಲೆ 317ಸಿ ವಲಯ 1, ಝೋನ್ 2ರ ಅಧ್ಯಕ್ಷರಾಗಿ ಮೊಹಮ್ಮದ್ ಅಶ್ರಫ್ ಆಯ್ಕೆ

Aware others:

ಕುಂದಾಪುರ: ಲಯನ್ ಜಿಲ್ಲೆ 317ಸಿ ವಲಯ 1 ಝೋನ್ 2ರ ಅಧ್ಯಕ್ಷರಾಗಿ ಕುಂದಾಪುರ ಕ್ರೌನ್‌ ಲಯನ್ಸ್ ಕ್ಲಬ್ ನ ಸದಸ್ಯ ಲಯನ್ ಮಹ್ಮದ್ ಅಶ್ರಫ್ ಆಯ್ಕೆಯಾಗಿದ್ದಾರೆ. ಲಯನ್ಸ್ ಚಳವಳಿಯ ವಿವಿಧ ಸೇವಾ ಚಟುವಟಿಕೆಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯವನ್ನು ಪರಿಗಣಿಸಿ ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಲಯನ್ ಮಹ್ಮದ್ ಅಶ್ರಫ್ ಅವರು ಈ ಹಿಂದೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್‌ನ ಮಾಜಿ ಅಧ್ಯಕ್ಷರಾಗಿ ಹಾಗೂ ಮಾಜಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಸಂಪುಟ ಸದಸ್ಯರಾಗಿಯೂ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಲಯ 1, ಝೋನ್ 2ರ ವ್ಯಾಪ್ತಿಯಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್, ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ವಡೇರಹೋಬಳಿ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ, ಲಯನ್ಸ್ ಕ್ಲಬ್ ಕುಂದಾಪುರ ವೇಟ್ ಝೋನ್ ಲಯನ್ಸ್ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಸಮನ್ವಯ, ಮಾರ್ಗದರ್ಶನ ಹಾಗೂ ಸೇವಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಜವಾಬ್ದಾರಿಗಳು ಲಯನ್ ಮಹ್ಮದ್ ಅಶ್ರಫ್ ಅವರ ಹೆಗಲೇರಿವೆ.

ಅಶ್ರಫ್ ಆಯ್ಕೆಗೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್‌ನ ಪದಾಧಿಕಾರಿಗಳು, ಸದಸ್ಯರು, ವಲಯದ ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!