BlogCulturalEconomyEducationEntertainmentFashionHighlightsHuman storiesLifestyleLocal newsOthersSuccess storiesTop StoriesTrending

ಕೋಟದ ಪಂಚವರ್ಣ ಸಂಘಟನೆಗೆ ಜೈ ಕುಂದಾಪುರ ಸೇವಾ ಪುರಸ್ಕಾರ

Aware others:

ಕೋಟ: ಇಲ್ಲಿನ ಉಡುಪಿ ಜಿಲ್ಲೆಯ ಸಾಮಾಜಿಕ ಕಳಕಳಿ ಹಾಗೂ ರಕ್ತದಾನದಂತಹ ಕಾರ್ಯಕ್ರಮಗಳಿಂದ ಮನೆಮಾತಾದ ಸಂಸ್ಥೆ ಕುಂದಾಪುರದ ಜೈ ಕುಂದಾಪುರ ಸೇವಾ ಟ್ರಸ್ಟ್ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯುತ್ತಿದ್ದು ಇದೇ ಬರುವ ಎಪ್ರಿಲ್ 12ರಂದು ಕೋಟ ಆರಕ್ಷಕ ಠಾಣೆಯ ಮುಂಭಾಗ ಜೈ ಕುಂದಾಪುರ ಸಂಭ್ರಮ-2026 ಎಂಬ ಶೀರ್ಷಿಕೆಯಡಿ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ಆಯೋಜಿಸಿದೆ.

ಈ ವೇದಿಕೆಯಲ್ಲಿ ಕೋಟದ ಕ್ರಿಯಾಶೀಲ ಸಂಘಟನೆಯಾದ ಪಂಚವರ್ಣ ಸಂಘಟನೆಗೆ ಜೈ ಕುಂದಾಪುರ ಸೇವಾ ಪುರಸ್ಕಾರ ನೀಡಿ ಗೌರವಿಸಲಿದೆ. ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಮಾಜಸೇವಕ ಕೋಟ ಶ್ರೀಕಾಂತ್ ಶೆಣೈ, ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ಧಾರ್ಮಿಕ ಮುಖಂಡ ಕೆ.ಭಾಸ್ಕರ್ ಸ್ವಾಮಿ ಇವರುಗಳಿಗೆ ವಿಶೇಷ ಅಭಿನಂದನೆ ಹಾಗೂ ಅಶಕ್ತರಿಗೆ ನೆರವು, ವಿಶೇಷ ಚೇತನರಿಗೆ ಕಿಟ್ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ, ತ್ರಿನೇತ್ರ ಕಲಾವಿದರು ಕುಡ್ಲ ಇವರಿಂದ ನಾಟಕ ಬ್ರಹ್ಮ ರಕ್ಕಸೆ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಪ್ರಮುಖರಾದ ಪುಂಡಲಿಕ ಮೊಗವೀರ, ಜಯರಾಜ್ ಸಾಲಿಯಾನ್ ಜಂಟೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!